ಪ್ರಿಯ ಬ್ಲಾಗಿನ ಮಿತ್ರರೇ,
ಇದು ನನ್ನ ಪ್ರೀತಿಯ ಮಹಾ ಪ್ರಭಂಧದ (ಪಿ.ಎಚ್.ಡಿ) ಕತೆ. ನನ್ನ ಸಂಶೋಧನಾ ವಸ್ತು "ಅನಾರೋಗ್ಯಕರ ಕಟ್ಟಡಗಳು ಮತ್ತು ಕಟ್ಟಡ ಸಂಭಂದಿ ಅನಾರೋಗ್ಯ ಗುಣ ಲಕ್ಷಣಗಳು". ಈ ನನ್ನ ಈ ಕತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅರಬ್ ರಾಷ್ಟ್ರಗಳೇ ಪ್ರೇರಣೆ ಮತ್ತು ಕಾರಣ.
ನಾನು ಮಾನಸಿಕವಾಗಿ "...." ಅಂದುಕೊಂದ್ರಾ ಸ್ವಲ್ಪ ತಾಳಿ ... ಮೂರು ದಶಕಗಳ ಹಿಂದಿನ ಕತೆ, ಅರಬ್ ಸಮುದಾಯ ಪ್ರಪಂಚದ ಮೇಲೆ ಹಿಡಿತ ಸಾದಿಸ ಹೊರಟ ಸಮಯ...ತನ್ನಲ್ಲಿ ತೈಲ ನಿಕ್ಷೇಪ ಮುಗಿದಿದೆ ಇನ್ನು ಜಗತ್ತಿಗೆ ನಮ್ಮಿಂದ ತೈಲ ಪೂರೈಕೆ ಅಸಾಧ್ಯ ಎಂದು ಘೋಷಿಸಿಕೊಂಡಿತು, ಆಗ ಕೊರೆಯುವ ಚಳಿಗಾಲ ಬೇರೆ, ಉಷ್ಣತಾ ಸಮತೋಲನ ಅನಿವಾರ್ಯ.ಇದಕ್ಕೆ ಪ್ರತ್ಯುತ್ತರವಾಗಿ ಪಾಶ್ಚಿಮಾತ್ಯ ದೇಶಗಳು ತಮ್ಮ ಕಟ್ಟಡ ವಿನ್ಯಾಸ, ವಾತಾಯನ ವ್ಯವಸ್ಥೆ ಬದಲಿಸಿತು. ಇದರ ತರುವಾಯು ಕೇಂದ್ರಿಕೃತ ವಾತಾಯನ, ತಾಪನ ಸಾಮಾನ್ಯವಾಯಿತು. ಮನುಷ್ಯ ಸಹಜ ಆಲಸ್ಯ, ಯಂತ್ರ ಸಂರಕ್ಷಣ ಸಿಬ್ಬಂಧಿಯ ಅಸಮರ್ಪಕತೆ ಕೂಡ ಹೊಸ ರೋಗಗಳಿಗೆ ಕಾರಣ ಕೂಡ ಆಯಿತು.... ಸಮಸ್ಯೆಗಳ ಸಾಕ್ಷಾತ್ಕರಣ...ನೋಡಿ ಇಲ್ಲಿಂದ ನನ್ನ ಗೆರೆ ತಿರುಗಿತು.
ಸೂಕ್ಷ್ಮ ಜೀವಿಗಳು ಹೆಚ್ಚು ಕಮ್ಮಿ ಚೀನಿಯರು ಮತ್ತು ಭಾರತೀಯರಂತೆ ಎಲ್ಲೆಂದರಲಿ ಹೊಂದಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುತ್ತವೆ. ಇವು ಹೊಸ ಪರಿಸರ ಕೇಂದ್ರಿಕೃತ ವಾತಾಯನ ಮತ್ತು ತಾಪನ ವ್ಯವಸ್ಥೆಯನ್ನು ಹೊರತು ಪಡಿಸಲಿಲ್ಲ. ಸೂಕ್ಷ್ಮ ಜೀವಿಗಳ ಮೆಟಾಬಲಿಸಮ್ ಕ್ರಿಯೆಯ ಉತ್ಪನ್ನ (ಬಿಯೋಆಕ್ಟಿವ್) ಕಟ್ಟಡಗಳಲ್ಲಿ ಪಸರಿಸಿ "ಅನಾರೋಗ್ಯಕರ ಕಟ್ಟಡಗಳು ಮತ್ತು ಕಟ್ಟಡ ಸಂಭಂದಿ ಅನಾರೋಗ್ಯ ಗುಣ ಲಕ್ಷಣಗಳು" ಎಂಬ ಹೊಸ ಪರಿಣಾಮಕ್ಕೆ ಕಾರಣವಾಯಿತು.
ಅಂತು ಇಂತು ನನ್ನ ಸಂಶೋಧನಾ ಕಾರ್ಯ ಮುಗಿದು (ಪಿ.ಎಚ್.ಡಿ) , ಮಹಾ ಪ್ರಭಂಧದ ಅಚ್ಚು ಹಾಕಿಸಿಕೊಂಡು ಹೊದಿಕೆ ಹೊದೆಯಲು ಹೋಗಿದೆ. ಇನ್ನು ಒಂದು ತಿಂಗಳಲ್ಲಿ ನನ್ನ ಕಥೆ ಮೌಕಿಕವಾಗಿ ಹೇಳಿದರೆ ಮುಗಿಯಿತು..ಮುಂದೆ ???? ಈ ಪ್ರಶ್ನೆ ಜನ ಕೇಳೀ ಕೇಳೀ ಸಾಕುಮಾಡಿದ್ದೂ ಆಯ್ತು....
ಮುಂದೇನು ಮತ್ತೇನು ಇಂದಿಗಾ ಮಾತೇಕೆ ??? ಏನೇ ಇರಲಿ ಪಿ.ಎಚ್.ಡಿ ಕಲಿಸಿದ ಒಂದು ದೊಡ್ಡ ಪಾಠ "ತಾಳ್ಮೆ" ಮತ್ತು "ದೃಢ ಹಾಗೂ ಅವಿರತ ಯತ್ನ". ಶುಭ ರಾತ್ರಿ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭ ಹಾರೈಕೆಗಳು.